ಹೃದಯಘಾಥ ಮತ್ತು ಫ್ರಥಮ ಚಿಕಿಸ್ತೆ (First aid)

ತಾವೆಲ್ಲುರು ಕೇಲವು ಚಲನಚಿತ್ರಗಳನ್ನು ನೋಡಿರುತ್ತೀರು. ಅದರಲ್ಲಿ ಒಬ್ಬಂಟಿಗನೇ ಇದ್ದ ವೈಕ್ತಿಗೆ ಎದುನೊವು ಕಾಣಿಸುತ್ತದೆ. ಆದರೆ ವೈಕ್ತಿಗೆ ಒಂದು ಸಣ್ಣ ಪೊಟ್ಟಣದಲ್ಲಿ ಇದ್ದ ಮಾತ್ರೆಗಳನ್ನು  ತೆಗೆದುಕೊಳ್ಳಲು ಆಗುವದಿಲ್ಲಾ, ಅದುದರಿಂದ ವೈಕ್ತಿ ಸಾವನ್ನಪ್ಪುತ್ತಾನೆ. ವಿಷಯವನ್ನು ಇಲ್ಲಿ ಎಕೆ ನಾನು ಬರೆಯುತ್ತಿದೇನೆ ಎಂದು ಯೊಚಿಸುತ್ತಿರುವಿರಾ?. ನಿಜ ಜೀವನದಲ್ಲಿ ಆತನಿಗೆ ಮಾತ್ರೆ ಕೈಗೆಟಕಿದ್ದರೆ ವೈಕ್ತಿ ಬದುಕಿ ಉಳಿಯುತ್ತಿದ್ದನಾ?. ಜನಸಾಮನ್ಯಾಗಿ ಹೃದಯಘಾಥವಾದಗ ಪ್ರಥಮ ಚಿಕಿಸ್ತೆ ಎನೆನೆ ಮಾಡಬೇಕು, ಯಾವುದಾದರು ಮಾತ್ರೆ ಕೊಡಬಹುದಾ ಮತ್ತು ವೈಕ್ತಿಯನ್ನು ಆಸ್ಪತ್ರೆಗೆ ಹೇಗೆ ಕರೆದುಕೋಂಡು ಹೋಗಬೆಕು ಎಂಬುದನ್ನು ತಿಳಿದುಕೊಳ್ಳುವುದೆ ಲೇಖಣದ ಉದ್ದೇಶ.




ಮೇಲಿನ ಪ್ರಸ್ತಾಪಕ್ಕೆ ಉತ್ತರ ಪಡೆಯಲು ನಾವು ಹೃದಯಘಾಥ ಎಂದರೇನು, ಅದರಲ್ಲಿ ಎಸ್ಟು ಪ್ರಕಾರಗಳಿವೆ, ಅವಕ್ಕೆ ಎನು ಉಪಚಾರ ಬೇಕು, ಎನ್ನುವದನ್ನು ಅರಿತುಕೊಳ್ಳಬೇಕು. ಅಮೇಲು ನಾವು  ಹೃದಯಘಾತವಾದ ವೈಕ್ತಿಗೆ ಜನಸಾಮಾನ್ಯನಾಗಿ ಎನು ಉಪಕಾರ ಮಾಡಬಹುದು ಎಂಬುದನ್ನು ಸರಳವಾಗಿ ಅರಿಯಬಹುದು.
ಹೃದಯಘಾಥದ ಲಕ್ಷಣಗಳೂ ಎನೆಂದರೆ? ಎದೆನೋವು ಸಾಮಾನ್ಯವಾಗಿ ಎದೆಯ ಮದ್ಯಭಾಗದಲ್ಲಿ ಇರುತ್ತದೆ, ಎದೆಯ ಮದ್ಯಭಾಗವನ್ನು ಜೋರಾಗಿ ಯಾರೊ ವತ್ತಿದಹಾಗೆ, ಅಥವಾ ಎದೆಯಯನ್ನು ಬೀಗಿಯಾಗಿ ಕಟ್ಟಿ ಹಾಕಿದ ಹಾಗೆ ಅನಿಸುತ್ತದೆ . ಎದೆನೋವುನ ಜೋತೆಗೆ  ಕೈಗಳಲ್ಲಿಯು ನೋವು ಕಾಣಿಸಬಹುದು, ಮತ್ತು ಉಸಿರಟದ ತೊಂದರೆಯು ಆಗಬಹುದು, ಜೋರಾಗಿ ಭೆವರು ಬರಬಹುದು. ಕೆಲವೊಮ್ಮೆ ಪ್ರಜ್ಞೆಯು ಹೋಗಬಹುದು 
ಹೃದಯಘಾಥವನ್ನು ಜನಸಾಮಾನ್ಯರಿಗಾಗಿ ಎರಡು ಪ್ರಕಾರಗಳೆಂದು ವಿಂಗಡಿಸೊನ,ಮೊದಲಯನದು ಸ್ಟೆಬಲ ಎಂಜೈನಾ (Stable angina) ಎರಡನೆಯದು ಎಕುಟ ಕೊರನರಿ ಸಿಂಡ್ರೊಮ್ (Acute  coronary syndorme).
ಸ್ಟೆಬಲ ಎಂಜೈನಾ, ತರಹದ ಹೃದಯಘಾತ ಇದ್ದ ವೈಕ್ತಿ ಸಾಮನ್ಯವಾಗಿ ಬಹಳದಿನದಿಂದ ಎದೆನೋವಿಂದ ಬಳಲುತ್ತಿರುತ್ತಾನೆ ಎದುನೋವು ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಅದು ನಿರಿದೀಸ್ಟ ಮಟ್ಟಿನ ಕೇಲಸ ಮಾಡಿದಾಗ ಮಾತ್ರ ಬರುತ್ತದೆ  ಮತ್ತು ವಿಶ್ರಾಂತಿ ತೆಗೆದುಕೊಂಡರೆ ಎದೆನೋವು ಹೋಗಿಬಿಡುತ್ತದೆ. ಎದೆನೋವು ಕಡಿಮೆ ಆಗದೆ ಹಾಗೆ ಉಳಿದು ಕೊಂಡರೆ ಐದು ಮಿಲಿಗ್ರಾಮ ಸೊರಬಿಟುರೆಟ (sorbitrate 5 mg) ಎಂಬ ಮಾತ್ರೆಯನ್ನು ನಾಲಿಗೆ ಕೇಳಗೆ ಇಟ್ಟುಕೋಳ್ಳಬೇಕು, ಐದು ನೀಮಿಷದಲ್ಲ ಎದುನೋವು ಕಡಿಮೆಯಾಗಬೇಕು ಇಲ್ಲವಾದಲ್ಲಿ ಇನ್ನೊಂದು ಐದು ಮಿಲಿಗ್ರಾಮ ಸೊರಬಿಟಿರೆಟ ಮಾತ್ರೆಯನ್ನು ನಾಲಿಗೆ ಕೇಳಗೆ ಇಟ್ಟುಕೋಳ್ಳಬೇಕು ಅವಾಗಲು ಕಡಿಮೆ ಆಗದಿದ್ದರೆ ಮುರನೆ ಹಾಗು ಕೊನಯ ಪ್ರಯತ್ನ ಮಾಡಬಹುದು ಇಲ್ಲವಾದಲ್ಲಿ ವೈಕ್ತಿಯನ್ನು ಆಸ್ಪತ್ರೆಗೆ ಕರೆದುಕೋಂಡು ಹೋಗಬೆಕು.
ಎಕುಟ ಕೊರನರಿ ಸಿಂಡ್ರೊಮ, ಇದರಲ್ಲಿ ಎದೆನೋವು  ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎದೆನೊವು ನಿರದಿಸ್ಟ ಕೇಲಸಕ್ಕೆ ಅವಲಂಭಿತವಾಗಿರುವದಿಲ್ಲಾ. ಎದೆನೊವು ಸುಮ್ಮನೆ ಮಾಲಗಿದಾಗಲು ಬರಬಹುದು. ಕೇಲಸ ಮಾಡುವಾಗ ಬಂದ ಎದೆನೊವು ವಿಶ್ರಾಂತಿ ತೆಗೆದುಕೊಂಡರು ಹೋಗುವದಿಲ್ಲ,  ಮೇಲೆ ತೀಳಿಸಿದ ಹಾಗೆ ಮುರು ಐದು ಮಿಲಿಗ್ರಾಮ  ಸೊರಬಿಟರೆಟ ಮಾತ್ರೆಗು ಕಡಿಮೆ ಆಗುವದಿಲ್ಲ. ಇಂಥ ವೈಕ್ತಿಗಳಿಗೆ ಆದಸ್ಟು ಬೇಗನೆ ಆಸ್ಪತ್ರೆ ಕರೆದುಕೊಂಡು ಹೋಗುವುದೆ ಒಳ್ಳೆಯದು.
ಹೃದಯಘಾತವಾದ ವೈಕ್ತಿಯನ್ನು ಆಸ್ಪತ್ರೆಗೆ  ಹೇಗೆ ಕರೆದುಕೋಂಡು ಹೋಗಬೆಕು ?.
ರೋಗಿಯನ್ನು ವಾಹಣದಲ್ಲಿ ಮಲಗಿಸಿಕೋಂಡು ಹೋಗಬೇಕು, ರೋಗಿ ಪ್ರಜ್ಞೆಯನ್ನು ಕಳೆದುಕೊಂಡರು ಸಹ ಕುಳಿಸಿಕೊಂಡು ಹೋಗಬೇಡಿ. ಉಸಿರಾಟಕ್ಕೆ ತೋಂದರೆಯಾಗಿ ಮಲಗಲು ಅಸಾದ್ಯವಾದರೆ ಮಾತ್ರ ಕುಳಿತುಕೋಳ್ಳಲು ಬಿಡಿ. ಆದಸ್ಟು ಎಂಬುಲನ್ಸನಲ್ಲಿ(ambulance) ಆಸ್ಪತ್ರೆಗೆ ರೋಗಿಯನ್ನು ಸಾಗಿಸಿ. ನಮ್ಮ ಕರ್ಣಾಟಕದಲ್ಲಿ 108 ದುರವಾಣಿ ಮಾಡಿದರೆ ಉಚಿತವಾಗಿ ಎಂಬುಲನ್ಸ ಮನೆಗೆ ಬಂದು ರೋಗಿಯನ್ನು ತಾವು ಬಯಸಿದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸೌಲಬ್ಯಇದೆ.
ರೋಗಿಯನ್ನು ಸಾಗಿಸುವಾಗ, ಹೃದಯ ಸ್ತಬ್ದವಾಗಬಹುದು (ಕಾರ್ಡಿಯಕ ಅರೆಸ್ಟ್ (cardiac arrest)) ಹಾಗೆ ಆದಾಗ ಎದೆಯ ಮಧ್ಯಭಾಗದಲ್ಲಿ ಜೋರಾಗಿ ಒಂದು ನಿಮಿಷಕ್ಕೆ ಅರವತ್ತರಿಂದ ಎಪ್ಪತ್ತು ಬಾರಿ ಒತ್ತಬೇಕು ಇದನ್ನು ಕಾರ್ಡಿಯಕ ರಿಸಾಸಿಟೇಶನ್ (cardiac resuscitation) ಎಂದು ಕರೆಯುತ್ತಾರೆ .ಕಾರ್ಡಿಯಕ ಅರೆಸ್ಟ್ ಹಾಗು ಕಾರ್ಡಿಯಕ ರಿಸಾಸಿಟೇಶನ್ ಬಗ್ಗೆ ಹೆಚ್ಚಿಗೆ ತೀಳೀದುಕೊಳ್ಳಲು ನಾನು ಮತ್ತೊಂದು ಪ್ರಬಂದು ಬರೆಯುತ್ತೇನೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು