ಹೃದಯ ಸ್ತಬ್ದತೆ (ಕಾರ್ಡಿಯಾಕ ಅರೆಸ್ಟ್)

ನಮ್ಮ ದೇಹದಲ್ಲಿ ಹೃದಯವು ಒಂದು ನೀಮಿಷಕ್ಕೆ 60 ರಿಂದ 100 ಸಲ ಬಡಿದು ಕೊಳ್ಳುತ್ತದೆ. ಹೃದಯ ತನ್ನ ಬಡಿತವನ್ನು ಸಂಪೂರ್ಣವಾಗಿ ನಿಲ್ಲಿಸದರೆ ಅದಕ್ಕೆ ಕಾರ್ಡಿಯಾಕ ಅರೆಸ್ಟ್ ಅಥವಾ ಹೃದಯ ಸ್ತಬ್ದತೆ ಎಂದು ಕರೆಯುತ್ತಾರೆ. ಕಾರ್ಡಿಯಕ ಅರೆಸ್ಟ್ ಆದ ವ್ಯಕ್ತಿ ಕೆಳಗೆ ಉರಳುತ್ತಾನೆ, ಆ ವೈಕ್ತಿಯ ರಕ್ತಾನಾಡಿಯನ್ನು ಪರಿಕ್ಷಿಸಿದರೆ ಅದು ತನ್ನ ಬಡಿತವನ್ನು ನಿಲ್ಲಿಸಿರುತ್ತದೆ, ಎದೆಗೆÉವಾಲಿ ಆಲಿಸಿದರೆ ಹೃದಯದ ಬಡಿತದ ಶ್ಬಬ್ದ ಕೇಳಿಸುವದಿಲ್ಲಾ. ಕೇಲವೆ ನಿಮಿಷದಲ್ಲಿ ಉಸಿರಾಟವು ನಿಲ್ಲುತ್ತದೆ. ಮತ್ತೆ ಆ ವ್ಯಕ್ತಿ ಜ್ಞಾಣವನ್ನು ಕಳೆದುಕೊಳ್ಳುತ್ತಾನೆ. ತಕ್ಷಣ ಉಪಚಾರ ಸೀಗದಿದ್ದರೆ ಪ್ರಾಣವು ಹೊಗಬಹುದು,
ಕಾರ್ಡಿಯಾಕ ಅರೆಸ್ಟ್ ಆಸ್ಪತ್ರೆ ಒಳಗೆ ಅಲ್ಲದೆ ಹೊರಗು ಆಗಬಹುದು. ಆಸ್ಪತ್ರೆಯ ಹೊರಗೆ ಆದಾಗ ಸುತ್ತಮುತ್ತಲಿನ ಸಾಮನ್ಯ ಜನರೆ (ವೈದ್ಯರಾಗಿಲ್ಲದವರು) ರೋಗಿಗೆ ಪ್ರಾಥಮಿಕ ಚಿಕೀಸ್ತೆ ನಿಡಬೇಕಾಗುತ್ತದೆ. ಕಾರ್ಡಿಯಾಕ ಅರೆಸ್ಟನ್ನು, ಕಾರ್ಡಿಯೊಫÀಲಮನರಿ ರೀಸಸಿಟಿನೆಶನ್ನ ಎಂಬ ಪ್ರಕ್ರೀಯೆ ಇಂದ ಸಾಕಸ್ಟು ಬಾರಿ ಪ್ರಾಣವನ್ನು ಉಳಿಸಬಹುದು. ಇದನ್ನು ಸಾಮಾನ್ಯ ಜನರು ಸ್ವಲ್ಪೆ ಮಟ್ಟಿನ ತರಬೇತಿಯಿಂದ ಕಲಿಬಹುದು.


ಕಾರ್ಡಿಯೊಫಲಮನರಿ ರೀಸಸಿಟಿನೆಶನ್ (ಸಾಮಾನ್ಯ ಜನರಿಗೆ ಕಾರ್ಡಿಯಕ ರೀಸಸಿಟಿನೆಶನ್ ಅಸ್ಟೆ) ಅಂದರೆ ಎದಯ ಮದ್ಯಭಾಗದಲ್ಲಿ ನಿಮಿಷಕ್ಕೆ 60 ರಿಂದ 70 ಬಾರಿ ಗಟ್ಟಿಯಾಗಿ ಒತ್ತುವುದು. ಹಾಗೆ ಒತ್ತುವಾಗ ರೋಗಿಯು ಅಂಗಾತ ಮಲಗಿರಬೇಕು. ರೋಗಿಯ ತೆಲೆ ಅವನ ಉಳಿದ ದೇಹಕ್ಕಿಂತ ಕೇಳಗಿರಬೇಕು, ಎಕೆಂದರೆ ಮೆದುಳಿಗೆ ರಕ್ತ ಹೆಚ್ಚಸುವ ಅವಸ್ಸಿಕತೆ ಅತಿ ಪ್ರಾಮುಖ್ಯ, ಉಸಿರಾಟದ ಬಗ್ಗೆ ಸಾಮಾನ್ಯ ಜನರು ಹೆಚ್ಚೆನು ಮಾಡಲು ಆಗುವದಿಲ್ಲ ಅದಕ್ಕಾಗಿ ಅದರ ಬಗ್ಗೆ ಸಾಮಾನ್ಯ ಜನರು ಹೆಚ್ಚು ತೆಲೆಕೆಡಿಸಕೊಳ್ಳಬೇಕಾಗಿಲ್ಲ.


ಕಾರ್ಡಿಯಾಕ ಅರೆಸ್ಟು ಮುಖ್ಯವಾಗಿ, ಎರಡು ವಿಧಾನಗಳ್ಳಲ್ಲಿ ಆಗುತ್ತದೆ, ಅಸಿಸ್ಟೊಲ್ ಮತ್ತು ವೆಂಟ್ರೀಕುಲರ್ ಫಿಭ್ರಿಲೆಶನ್. ಅಸಿಸ್ಟೊಲ್‍ನಲ್ಲಿ ಹೃದಯ ತನ್ನ ಬಡಿತದ ವೇಗವನ್ನು ನಿಧಾನವಾಗಿಸುತ್ತ ನಿಂತುಕೋಳ್ಳತ್ತದೆ. ವೆಂಟ್ರಿಕುಲರ್ ಫಿಬ್ರಿಲೆಶನ್‍ನಲ್ಲಿ ಹೃದಯ ತನ್ನ ಗತಿಯನ್ನು ಹೆಚ್ಚಿಸುತ್ತಾ ನಿಂತುಕೊಳ್ಳುತ್ತದೆ. ಕಾರ್ಡಿಯೊಫಲಮನರಿ ರೀಸಸಿಟಿನೆಶನ್ ವೆಂಟ್ರಿಕುಲರ್ ಫಿಬ್ರಿಲೆಶನ್ನ್ ಮತ್ತು ಅಸಿಸ್ಟೊಲ್‍ಗೆ ಉಪಯುಕ್ತವಾದ ಉಪಚಾರ.


ವೆಂಟ್ರಿಕುಲರ್ ಫಿಭ್ರಿಲೆಶನ್ ಸಾಮನ್ಯವಾಗಿ ಹೃದಯದ ಕಾಯಿಲೆಯಿಂದ ಆಗುತ್ತದೆ. ಅಸಿಸ್ಟೊಲ ದೇಹದ ಬೇರೆ ಕಾಯಿಲೆಯಿಂದ ಆಗುತ್ತದೆ, ಉದಾಹರಣೆಗೆ ಮುತ್ರಪಿಂಡ ಕಾಯಿಲೆ, ಮೆದುಳಿನ ಕಾಯಿಲೆ ಮತ್ತು ಇತ್ಯಾದಿ. ಆಸ್ಪತ್ರೆಯ ಹೊರಗೆ ಅಸಿಸ್ಟೊಲಗಿಂತ ವೆಂಟ್ರಿಕುಲರ್ ಫಿಬ್ರಿಲೆಶನ್ ಆಗುವ ಸಂಭವ ಹೆಚ್ಚು. ವೆಂಟ್ರಿಕುಲರ್ ಫಿಬ್ರಿಲೆಶನಗೆ ಎದೆಯ ಮದ್ಯಭಾಗದಲ್ಲಿ ಗಟ್ಟಿಯಾಗಿ ಒತ್ತುವ ಜೊತೆಗೆ ಡಿ-ಫಿಬ್ರಿಲೆಟರ ಯಂತ್ರದಿಂದ ವಿದ್ಯುತ ಶೊಕನ್ನು ಕೊಡುವ ಅವಸ್ಸಿಕತೆ ಇರುತ್ತದೆ. ನಮ್ಮ ದೇಶದಲ್ಲಿ ಮುಂದುವರದೆ ದೇಶಗಳ ಹಾಗೆ ಡಿ-ಫಿಬ್ರಿಲೆಟರ ಯಂತ್ರಗಳು ಆಸ್ಪತ್ರೆ ಹೊರಗೆ ಜನದಟ್ಟು ಪ್ರದೆಶಗಳ್ಳಲ್ಲಿ ಇಲ್ಲ.

ನಮ್ಮ ದೇಶದಲ್ಲಿ ಕಾರ್ಡಿಯೊಫÀಲಮನರಿ ರೀಸಸಿಟಿನೆಶನ್ ತರಬೇತಿಯನ್ನು ಪಡಿದವರು 100 ಜನರಲ್ಲಿ ಒಬ್ಬನೆ ವ್ಯಕ್ತಿ. ಒಂದು ವರ್ಷದಲ್ಲಿ 7,50,000 ಸಾವುಗಳು ಕಾರ್ಡಿಯಾಕ ಅರೆಸ್ಟನಿಂದ ಆಗುತ್ತವೆ, ಇದರಲ್ಲಿ 80% ಆಸ್ಪತ್ರೆಯ ಹೋರಗೆ ಆಗುತ್ತವೆ. ಆದುದರಿಂದ ಸಾಮನ್ಯ ಜನರು ಕಾರ್ಡಿಯೊಫÀಲಮನರಿ ರೀಸಸಿಟಿನೆಶನ್ ಕಲಿಯುವುದು ಅನಿವಾರ್ಯವಾಗಿದೆ. ಇದನ್ನು ಹೈಸ್ಕೂಲ ಮತ್ತು ಕಾಲೇಜ ವಿದ್ಯರ್ಥಿಗಳಿಗೆ ಸರಳವಾಗಿ ಕಲಿಸಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು