ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ನಾನು ಒಬ್ಬ ಹೃದಯ ತಜ್ಞ ನನಗು ಮತ್ತು ಕಿಡ್ನಿಗು ಎನು ಸ್ಂಬದ ಅಂತಿರಾ! ಮುಂದೆ ನೀವೆ ಓದಿ, ನೀಮಗೆ ಗೋತ್ತಾಗುತ್ತೆ,  ಇದು ನಡೆದ ಸತ್ಯ ಘಟನೆ . ಕೇಲವು ತಿಂಗಳಿನ ಹಿಂದೆ ನನ್ನಲ್ಲಿ ಒಬ್ಬ ರೋಗಿ ಬಂದ್ದಿದ್ದಾ. ಬಂದ ರೋಗಿ ವೀಪರಿತ ಎದೆ ನೋವಿನಿಂದ ಬಳಲುತ್ತಿದ್ದಾ.
ಅವನ ಇಸಿಜಿ ಮಾಡದ ನಂತರ ಅವನಿಗೆ ಹೃದಯಘಾತ ಆಗಿರುವುದು ಗೊತ್ತಾಯಿತು. ರೋಗಿ ಪಕ್ಕದ ಹಳ್ಳಿಯಿಂದ ಬಂದ್ದಿದ್ದಾ.ಅವನು ಸುಮಾರು ಅರವತ್ತು ವರ್ಷದವನಿದ್ದಾ. ಆತನಿಗೆ ಎಂಜೊಪ್ಲಾಸ್ಟಿ ಮಾಡಬೆಕ್ಕಾಗಿದ್ದರಿಂದ ಆತನನ್ನು ಕ್ಯಾತಲ್ಯಾಬಗೆ ಕಳಿಸಿಕೊಟ್ಟೆ. ನಾನು ಆತನ ಹಿಂದೆಯೆ ಕ್ಯಾತಲ್ಯಾಬಿಗೆ ಧಾವಿಸಿದೆ.


ಆತನಿಗೆ ಎದೆನೊವು ವಿಪರಿತವಾಗಿತ್ತು, ನನಗೆ ಆದಸ್ಟುಬೇಗ ಎಂಜೊಪ್ಲಾಸ್ಟಿ ಮಾಡಿ ಆತನ ಜೀವವನ್ನು ಉಳಿಸುವ ಗುರಿ ಪ್ರಾಮುಕ್ಯವಾಗಿತ್ತು. ಎಂಜೊಪ್ಲಾಸ್ಟಿ ಮಾಡಬೇಕಾದರೆ ನಾವು ತೊಡೆಯಮೇಲೆ ಇಂಜೆಕ್ಷನ ಮಾಡುಬೆಕಾಗುತ್ತದೆ. ತೊಡೆಯಮೆಲೆ ಇಂಜೆಕ್ಷನ ಮಾಡಲು ನಾನು ಮುಂದಾದಾಗ. ರೋಗಿ ಎಕದಮ್ಮ ಘಾಬರಿಗೊಂಡು ಜೊರಾಗಿ “ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ” ಅಂದಾ. ನನಗೆ ಬಹಳ ವೀಚಿತ್ರವೇನಿಸಿತು. ಅಲ್ಲಾ ಇವನಿಗೆ ನಾ ಹೇಗಪ್ಪ ಕಿಡ್ನಿ ತಂಕೊತ್ತಿನಿ ಅಂತ ವಿಚಾರ ಬಂತು.

ನಾ ಅಂದೆ ಅಲ್ಲಪ್ಪಾ ಕಿಡ್ನಿ ಮೇಲಿ ಹೊಟ್ಟ್ಯಾಗ ಇರತಾವು , ನಾ ಇಲ್ಲೆ ಕಾಲಾಗಿಂದ ಹೆಂಗಪ್ಪ ತಕೊಳ್ಳಾಕ ಸಾದ್ಯ ಹೇಳು. ಆತ ಅಂದ. ಹೋಗರೀ ಡಾಕ್ಟರ, ಕಿಡ್ನಿ ಅಲ್ಲೆ ಕಾಲ ಸಂದ್ಯಾಗ ಇರತಾವು ಅಂದಾ.. ನನಗ ಓಂದ ನಿಮಿಷ ಎನ ಉತ್ತರಾಕೊಡ ಬೆಕಂತ ತಿಳಿಲೆ ಇಲ್ಲಾ. ನನಗ ಚಿಂತಿ ಸ್ವಲ್ಪ ಹೆಚ್ಚು ಕಡಿಮಿ ಆದರ ಇವನ ಜಿವ ಹೊಕ್ಕತಿ ಹಂತಾದ್ರಾಗ ಇವ ಇಲ್ಲದ ಕಿಡ್ನಿ ವಿಷಯ ತಗದಾನ ಎನ ಮಾಡುದು. ನೋಡಪ್ಪಾ ನಿನಗ ಇಸ್ಟ ಜೋರಾಗಿ ಎದಿ ನೊಸಾಕತ್ತ್ಯತಿ ಅಂತಾದಾರಾಗಿ ನೀ ಕಿಡ್ನಿ ಕಿಡ್ನಿ ಅಂತ ಅನ್ನಾಕತ್ರ ನಾ ಹ್ಯಾಂಗ ನಿನಗ ಎಂಜೋಪ್ಲಾಸ್ಟಿ ಮಾಡ್ಲಿ? ಸುಮ್ಮನ ಇರಪ್ಪಾ ಅಂದೆ.  ಎನ್ರಿ ಡಾಕ್ಟರೆ ಹಿಂಗತಿರಿ,  ಕಿಡ್ನಿ ಹೋತಂದ್ರ ಬದಿಕ್ಯಾದ್ರು ಎನು ಪ್ರಯೊಜನಾ ಅನಬ್ಯೆಕಾ ಅರವತ ವರ್ಷದ ಮುದಕಾ. ನಾ ಮನಿಸಿನ್ಯಾಗ ಅನಕೊಂಡೆ ಬಹದೂರ ಗಂಡು ಮುದಕ ಜೋರ ಅದಾನ ಇವನಿಗೆ ಹೆಂಗಪ್ಪಾ ಸರಿಮಾಡುದು. ನಾ ಹೇಳಿದೆ ನೊಡಪಾ ನಿನಗ ನಾ ನಿನ್ನ ಬೀಜಾ ತಕೊಂತ್ತಿನಿ ಅಂತ ಚಿಂತಿ ಹೌದಲೊ ಅಂದೆ, ಅದಕ ಅವಾ ಹೌದು ಅಂದ. ಹಾಂಗಾದ್ರ ಒಂದಾ ಕೇಲಸಾ ಮಾಡ ನಿನ್ನ ಭೀಜಾ ಎಂಜೊಪ್ಲಾಸ್ಟಿ ಮುಗಿಯುಮಟಾ ಕೈಯಾಗ ಹಿಡಕೊ ಅಂದೆ, ಆಗಲಿ ಅಂತ  ಹಿಡಕೊಂಡ. ಎಂಜೊಪ್ಲಾಸ್ಟಿ ಮುಗದಮ್ಯಾಲಿ ಕೇಳಿದೆ ನಿನ್ನ ಕಿಡ್ನಿ ಅದಾವಿಲ್ಲ ನೋಡಿ ಹೇಳು ಅಂದೆ. ಡಾಕ್ಟರ ಅದಾವರಿ ಅಂದ ನಾ ನಕ್ಕೊತ ಕೇಳಿದೆ ಎರಡು ಅದಾವಿಲ್ಲ ನೊಡಿ ಹೇಳ ಅಂದೆ. ಡಾಕ್ಟರ ನಾ ಎರಡೂ ಹಿಡಕೊಂಡ ಮಕ್ಕೊಂಡೆನ್ರಿ ಅಂದಾ.

ನನಗ ಒಂದ ವಿಚಿತ್ರ ಅನಿಸಿದ್ದ ಎನೆಂದ್ರ ಅಸ್ಟ ಜೋರ ಎದಿ ನೊಸಕತ್ತಾಗ  ಎದಿ ಹಿಡಕೊಳ್ಳುದು ಬಿಟ್ಟ ತನ್ನ ಭೀಜಾ ಹಿಡಕೋಂಡ ಎಂಜೊಪ್ಲಾಸ್ಟಿ ಮಾಡಿಸಿಕೋಂಡನಲ್ರಿ!!??. .

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು