ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು

ಇತ್ತೀಚಿನ ದಿನಗಳ್ಳಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ, ವೈದ್ಯರ ತಪ್ಪು ನಡವಳಿಕೆಗಳ ಬಗ್ಗೆ ವಾರ್ತೆಗಳು ಬರುತ್ತಿವೆ. ಹಿಂತ ವಾರ್ತೆಗಳು ಬರುವುದು ಮೊದಲೆನೆಯ ಬಾರಿ ಅಲ್ಲಾ.  ಹಿಂತ ವಾರ್ತೆಗಳಿಂದಾ ಸಾರ್ವಜನಿಕರಲ್ಲಿ ಒಂದು ರೀತಯ ಭಯದ ವಾತಾವರಣ ಉಂಟಾಗಿದೆ. ಎಷ್ಟೋ ಸಾರಿ ರೋಗಿಗಳು ಕಿಡ್ನಿಗೆ ಸಮಬಂಧವಿಲ್ಲದ ರೋಗದಲ್ಲೂ ಸಹ, ವೈದ್ಯರು ತಮ್ಮ ಕಿಡ್ನಿಯನ್ನು ಕದಿಬಹುದೆಂದು ಸಂದೇಹವನ್ನು ವೈಕ್ತಪಡಿಸುತ್ತಾರೆ. 


ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ ತಪ್ಪು ನಡವಳಿಕೆಗಳ ಬಗ್ಗೆ ನಾವು ತಿಳಿದುಕೊಳ್ಳೋಣ. ನಮ್ಮ ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚು. ನಮ್ಮಲ್ಲಿಯ ಶ್ರೀಮಂತರು ತಮ್ಮ ಸಮಬಂಧಿಕರಿಗೆ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ಅವಶ್ಯಕತೆ ಬಂದಾಗ, ಬಡವರಿಂದ ಕಿಡ್ನಿಯನ್ನು ದುಡ್ಡಿನ ಆಶೆ ತೋರಿಸಿ ಕೊಳ್ಳುತ್ತಾರೆ. ಹಿಂತಾ ಪ್ರವರ್ತಿಯನ್ನು ನಮ್ಮ ಭಾರತ ಸರಕಾರ ಕಾನೂನು ಬಾಹಿರು ಮತ್ತು ಅಪರಾಧವೆಂದು ಪರಿಗಣಿಸಿದೆ. ಇದನ್ನು ತಡೆಯಲು ತಮ್ಮ ಸಮಬಂದಿಕರಲ್ಲಿ ಮಾತ್ರ ಕಿಡ್ನಿಯನ್ನು ಕೊಡಬಹುದು ಎಂದು ಕಾನೂನನ್ನು ರೂಪಿಸಿದೆ. ಈ ಕಾನೂನಿನಿಂದಾ ಆಗುವ ಪರಿಣಾಮಗಳ ಬಗ್ಗೆ ನಾನು ಪ್ರಬಂಧವನ್ನು  ಬರೆಯುತ್ತಿಲ್ಲಾ. 

ಕೇಲವ ದಿನಗಳ ಹಿಂದೆ ಮುಂಬಯಿ ನಗರದಲ್ಲಿ ಕೆಲವು ವೈದ್ಯರ ಮೇಲೆ ಆಪಾದನೆಗಳು ಬಂದವು. ಅದೇನೆಂದರೆ ಇಬ್ಬರು ತಾವು ಗಂಡ ಹೆಂಡತಿ ಎಂದು ಸುಳ್ಳು ಮದುವೆ ರಜಿಸ್ಟ್ರೇಶನ್ ಮಾಡಿಸಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ಮಾಡಿಸಿಕೊಂಡರು. ಇದರಲ್ಲಿ ಕಿಡ್ನಿ ಕೊಟ್ಟ ವೈಕ್ತಿಗೆ, ತನ್ನ ಕಿಡ್ನಿಯನ್ನು ತಗೆದುಕೊಳ್ಳುವ ವಿಷಯ ಬಗ್ಗೆ ಪೂರ್ಣ ಮಾಹಿತಿಯಿತ್ತು. ಆ ವೈಕ್ತಿಯಿಂದಾ ಲಿಖಿತವಾಗಿಯೂ ಪರವಾನಿಗೆಯನ್ನು ಪಡೆಯಲಾಗಿತ್ತು. 

ಮತ್ತೊಂದು ಘಟನೆಯನ್ನು ನಾನು ಹೇಳಬಯುಸುತ್ತೇನೆ . ಇದು ಉತ್ತರಪ್ರದೇಶದಲ್ಲಿ ನೆಡೆದ್ದಿದ್ದು. ಒಬ್ಬ ಗರ್ಬಿಣಿ ಮಹಿಳೆಗೆ ಶತ್ರಚಿಕಿಸ್ತೆ ಮಾಡಿ ಮಗುವನ್ನು ಹೊರೆಗೆ ತೆಗೆಯಲಾಗಿತ್ತು. ಶತ್ರಚಿಕಿಸ್ತೆ  ಆದಮೇಲೆ ಅವಳ ಪರಸ್ಥಿತಿ ದಿನದಿಂದ ದಿನಕ್ಕೆ ಕೆಡಲಾರಂಭಿಸಿತು. ಅವಳ್ಳನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾವಣೆ ಮಾಡಲಾಯಿತು, ಅಲ್ಲಿ ಹೊಟ್ಟೆಯ  ಸ್ಕಾನ್ ಮಾಡಿನೋಡಿದಾಗ ಅವಳಲ್ಲಿ ಒಂದೆ ಕಿಡ್ನಿ ಇದೆಯಂಬ ವಿಷಯ ಬೆಳಕಿಗೆ ಬಂತು. ರೋಗಿಯ ಗಂಡ ತನ್ನ ಹೆಂಡತಿಯ ಕಿಡ್ನಿಯನ್ನು ವೈದ್ಯರು ಶತ್ರಚಿಕಿಸ್ತೆ ಮಾಡುವಾಗ ಕದ್ದಿದ್ದಾರೆ ಎಂದು ದೂರನ್ನು ನೀಡಿದನು. ಶತ್ರಚಿಕಿಸ್ತೆ  ಮಾಡಿದ ವೈದ್ಯರು ಅವಳ ಪರಸ್ಥಿತಿ ಕೆಡವುದಕ್ಕೆ ಕಾರಣ ಕಿವ ಆಗಿರುವದು, ಮತ್ತು ಅವಳ ಕಿಡ್ನಿಯನ್ನು ನಾವು ಕದ್ದಿಲ್ಲಾ ಎಂದು ಸ್ಪಷ್ಟನೆ ನೀಡದರು. ಕೆಲವರಲ್ಲಿ ಹುಟ್ಟಿನಿಂದ ಒಂದೇ ಕಿಡ್ನಿ ಇರುತ್ತದೆ. ಈ ಗರ್ಭಿಣಿಯಲ್ಲಿ ಹುಟ್ಟಿನಿಂದಾ ಒಂದೆ ಕಿಡ್ನಿ ಇದ್ದಿರಬಹುದೆಂದು ಶತ್ರಚಿಕಿಸ್ತೆ ಮಾಡಿದ ವೈದ್ಯರು ಅಭಿಪ್ರಾಯ ಪಟ್ಟಿದಾರೆ,

ಈಗ ನಾವು ಕಿಡ್ನಿ ಅಂದರೆ ಮೂತ್ರಪಿಂಡ ಎಲ್ಲಿ ಇರುತ್ತದೆ ಎಂಬುದನ್ನು ತಿಳಿಯೋಣ. ಏಕೆಂದರೆ ಸ್ವಲ್ಪ ಜನಕ್ಕೆ ಕಿಡ್ನಿ ಮತ್ತು ವೃಷಣಗಳು (ತರಡು) ಇವಗಳ ನಡುವಿನ ವೈತ್ಯಾಸದ ಬಗ್ಗೆ ಅರಿವಿಲ್ಲಾ.  ವೃಷಣಗಳು ಮತ್ತು ಕಿಡ್ನಿಯ ನಡುವಿನ ಗೊಂದಲದ ಬಗ್ಗೆ ಒಂದು ಪ್ರಬಂಧವನ್ನು ಬರೆದಿದ್ದೀನಿ ಅದನ್ನು ಓದಲು ಕ್ಲಿಕ ಮಾಡಿ . ಕಿಡ್ನಿ ಬೆನಿನ್ನಿನ  ಹಿಂಭಾಗದಲ್ಲಿ ಇರುತ್ತದೆ ಅದು ತುಂಬಾ ಮೇಲೆ. ಚಿತ್ರ ನೋಡಿ. ಅದರಲ್ಲಿ ಕಿಡ್ನಿಯನ್ನು ಬೆನ್ನ ಹಿಂದೆ  ತೋರಿಸಲಾಗಿದೆ
ಕಿಡ್ನಿಯನ್ನು ಬೆನ್ನ ಹಿಂದೆ  ತೋರಿಸಲಾಗಿದೆ
ಗರ್ಭಿಣಿಗೆ ಶತ್ರಚಿಕಿಸ್ತೆ ಮಾಡುವುದು ಹೊಟ್ಟೆಯ ಮುಂಭಾಗದಿಂದ ಅದು ತೀರಾ ಕೆಳೆಗಿನಿಂದಾ. ಇಲ್ಲೆಯಿಂದ ಅತಿ ಮೇಲೆ ಮತ್ತು ಹಿಂದೆ ಇರುವ ಕಿಡ್ನಿಯನ್ನು ತೆಗೆಯುವುದು ಅಸಾಧ್ಯದ ಮಾತು. 

ವೈದ್ಯ ಮತ್ತು ರೋಗಿಗಳ ನಡುವಿಣ ಅಪನಂಬಿಕೆಯಿಂದೆ ಇಂಥ ಅವಾಂತರಗಳು ಇವತ್ತಿನ ದಿನ ಹೆಚ್ಚುತ್ತಿವೆ, ನಾವು ವೈದ್ಯರು ರೋಗಿಗಳಿಗೆ ಉಪಚಾರ ಮಾಡುವುದರ ಜೊತೆಗೆ ಜನರಲ್ಲಿ ಇರುವ ಸಂದಾಹಗಳ್ಳನ್ನು ಹೋಗಲಾಡಿಸಿದರೆ. ನಮಗೆ ರೋಗಿಗಳನ್ನು ಉಪಚಾರ ಮಾಡುವುದು ಸರಳವಾಗುದು ಎಂದು ನನ್ನ ಭಾವನೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ