ಹೃದಯರೋಗದ ಹೊಗೆ

ಸರ ! 25 ವರ್ಷದ ಹುಡುಗ, ಅವನು ತುಂಬಾ ಎದೆನೋವಿನಿಂದಾ ನರಳುತ್ತಿದ್ದಾನೆ. ಎಂದು ನನಗೆ ದೂರವಾಣಿ ಬಂತು. ಇಸಿಜಿ ಮಾಡಿದೆನಾಪಾ ಎಂದು ನಾನು ಕೇಳಿದೆ?. ಮಾಡಿದ್ದೇನೆ ಸರ, ಆಚೆಕಡೆಯಿಂದ ಫೋನಿನಲ್ಲಿ ಉತ್ತರ, ಹಾಗಾದರೆ whatsappನಲ್ಲಿ ಮೆಸೇಜ ಕಳಿಸು ಅಂತ ನಾ ಹೇಳಿದೆ. ಆಗಲಿ ಅಂತ ಆಚೆಕಡೆಯಿಂದ.

ಕೆಲೆವೆ ಕ್ಷಣದ ನಂತರ ಹುಡುಗನಿಗೆ ತೀರ್ವ ಹೃದಯಾಘಾಥವಾಗಿದ್ದು whatapp ನಲ್ಲ್ಲಿ ಬಂದ ಮೆಸೇಜಿನಿಂದ ರುಜುವಾಯಿತು.ಅವನ್ನನ್ನು ಬೇಗನೆ ಕ್ಯಾತಲ್ಯಾಬಿಗೆ ಸ್ಥಳಾಂಥರೀಸಲು ಹೇಳಿದೆ, ಮತ್ತು ನಾನು ಕ್ಯಾತಲ್ಯಾಬಿಗೆ ಧಾವಿಸಿದೆ.

ಅಲ್ಲಿ ತಲುಪದೆ ನಂತರ, ನನ್ನ ಹಿಂದಿನ್ನಿಂದ ಸಣ್ಣ ದ್ವನಿಯಲ್ಲಿ ಯಾರು ಕೊಗಿದ ಶಬ್ದ ಕೇಳಿತು. ನಾನು ಮರಳಿ ನೋಡಿದೆ. ಐದಾರು ಜನ ನನ್ನ ಹತ್ತಿರ ಬರುತ್ತಿದ್ದರು, ಎಲ್ಲರು ಮುಖದಲ್ಲಿ ಆಘಾತದ ಸಂಕೇತ ಸ್ಪಸ್ಟವಾಗಿ ಕಾಣಿಸುತ್ತಿತ್ತು, ಎಲ್ಲರ ಕೆನ್ನೆಗಳು ವದ್ದೆಯಾಗಿದ್ದವು ಮತ್ತು ಕಣ್ಣುಗಳು ಕೆಂಪಾಗಿದ್ದವು. ತಮ್ಮ ತಮ್ಮ ಮುಖಗಳನ್ನು, ಕಿರಿವಸ್ತ್ರಗಳಿಂದ ವರಸಿಕೊಳ್ಳುತ್ತಾ ನನ್ನ ಕಡೆಗೆ ಬಂದರು.

ಅವರಲ್ಲಿ ಇದ್ದ, ಸುಮಾರು 60 ರಿಂದ 70 ವರ್ಷದ ಮುದುಕ ಸರ! ಏನಾಗಿದೆ ನನ್ನ ಮಗನಿಗೆ ಎಂದು ಕೇಳಿದಾ. ಅವನ್ನನ್ನು ನೋಡಿದರೆ ತುಂಬಾ ಶ್ರೀಮಂತನಂತೆ ಕಾಣುತ್ತಿದ್ದಾ. ಅವನ ಬಳಿಯಲ್ಲಿ ಸುಮಾರು 50 ವರ್ಷದ ಮಹಿಳೆಯು ಸಹ ಇದ್ದಳು ಅವಳು ತನ್ನ ಅಳುವನ್ನು ನಿಲ್ಲಿಸಲು ಎಷ್ಟೇ ಪ್ರಯತ್ನಿಸಿದರೂ, ಕಣ್ಣೀರು ಹಾಗೆಯೆ ಸುರಿಯುತ್ತಿತ್ತು, ಅವಳು ರೋಗಿಯ ತಾಯಿ ಇರಬಹುದೆಂದು ತಿಳಿದುಕೊಳ್ಳಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲಾ.

ಅಷ್ಟರಲ್ಲಿ ನನ್ನ ಗಮನ ಅಳುತ್ತಿರುವ ಒಂದು ಸುಂದರ ಯುವತಿ ಕಡೆಗೆ ಹರಿಯಿತು, ಅವಳ ಹಿಂದೆ ಇದ್ದ ವೈಕ್ತಿ ಸುಮಾರು 60 ವರ್ಷವಿರಬಹುದು, ಸರ! ಏನಾಗಿದೆ ಅವನಿಗೆ ಅಂದ, ಅವನ ಹತ್ತಿರ ಇನ್ನೊಬ್ಬ 50 ವರ್ಷದ ಮಹಿಳೆಯು ಸಹ ಇದ್ದಳು, ಅವಳ್ಳನ್ನು ನೋಡಿದರೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲು ತವಕಿಸುವ ಹಾಗೆ ಕಾಣುತ್ತಿದ್ದಳು.

ಅವನಿಗೆ ತೀರ್ವ ಹೃದಯಾಘಾಥವಾಗಿದೆ, ಅವನಿಗೆ ಅರ್ಜಟಾಂಗಿ ಎಂಜೊಪ್ಲಾಸ್ಟಿ ಮಾಡಬೇಕು, ಎಂದು ನಾನು ಅವರಿಗೆ ಹೇಳಿದೆ.

ಸರ! ಹೇಗಾದರೂ ಮಾಡಿ ಅವನನ್ನು ಉಳಿಸಿಕೊಡಿ ಎಂದು ರೋಗಿಯ ತಂದೆ ಹೇಳಿದಾ. ನನ್ನ ಪ್ರಯತ್ನ ನಾನು ಮಡುತ್ತೇನೆ ಎಂದು ನಾನು ಹೇಳಿದೆ.

ಅಷ್ಟರಲ್ಲಿ, ಸುಂದರ ಯುವತಿಯ ಹಿಂದೆ ನಿಂತ್ತಿದ್ದ 50 ವರ್ಷದ ಮಹಿಳೆ, ಸಾಹೇಬ್ರ! ಮುಂದೆ ಅವನ ಜೀವನ ಹೇಗಿರುತ್ತದೆ ಎಂದು ನನ್ನನ್ನು ಕೇಳಿದಳು. ನಾನು ಮೊದಲು ಈಗ ಬಂದಿರುವ ಗಂಡಾಂತರದಿಂದ ಪಾರಾಗೋಣ ಅಮೇಲೆ ಮುಂದಿನ ವಿಚಾರ ಎಂದು ಹೇಳಿದೆ.

ಕ್ಯಾತಲ್ಯಾಬಿನಲ್ಲಿ ನೋಡಲು, ಕನ್ನಡದ ಖ್ಯಾತ ಚಿತ್ರನಟ ದಿಂಗತನನ್ನ ಹೋಲುವ ಹುಡುಗ ಮಲಗಿದ್ದಾ, ಅವನ ಹೆಸರು ಜೀವನ, ಆತ ಎದೆನೋವಿನ್ನಿಂದ ವಿಪರೀತಿವಾಗಿ ನರಳುತ್ತಿದ್ದಾ. ಎನು ತೊಂದರೆ ಎಂದು ಹುಡುಗನಿಗೆ ಕೇಳಿದೆ? ಆತ ಸರ! ತಾಳಲಾಗದಷ್ಟು ನೋವಾಗುತ್ತಿದೆ ಅಂದಾ. ಸ್ವಲ್ಪಾ ತಾಳು ನೋವು ಕಡಿಮೆ ಆಗುತ್ತದೆ ಎಂದು ನಾನು ಅವನಿಗೆ ಹೇಳಿದೆ

ನಾನು ನನ್ನ ಎಂಜೊಪ್ಲಾಸ್ಟಿ ಮಾಡಿ ಮುಗಿಸಿದೆ, ಅವನ ಎದೆ ನೋವು ನಿವಾರಣೆ ಆಯಿತು. ಥಿಯಾಂಕ್ಯೂ ಸರ್ ಅಂದ. ನಾನು ಮುಗಳು ನಗೆಯಿಂದ ಅವನ್ನನ್ನು ಸಮ್ಮತಿಸಿದೆ


ನೋಡಲು ಇಷ್ಟು ಚನ್ನಾಗಿ ಕಾಣಿಸುತ್ತೀಯಾ, ನಿನಗೆ ಸಕ್ಕರೆ ಅಥವಾ ಬಿಪಿ ಕಾಯಿಲೆ ಇಲ್ಲವಾ ತಾನೇ ಎಂದು ಹುಡಗನ್ನನ್ನು ಪ್ರಶ್ನಿಸಿದೆ? ಸರ್! ದಿನಾಲೂ ನಾನು ಜಿಮ್ಗೆ ಹೋಗುತ್ತೇನೆ, ನಾನು ಮೊನ್ನೆ ಬೆಂಗಳೂರಿನಲ್ಲಿ ನೆಡೆದೇ 20 ಕಿಲೋಮೀಟರು ಮರೋಥಾನ್ ಕೋಡಾ ಓಡಿದ್ದೇನೆ ಅಂದಾ.

ನಾನು, ಹೌದಾ? ಮತ್ತೆ ಸಿಗರೇಟು ಅಥವಾ... ಅಷ್ಟರಲ್ಲಿ, ಹುಡುಗಾ ಹತ್ತಿರ ಬರುತ್ತಿರುವ ತನ್ನ ತಂದೆಯ ಕಡೆಗೆ ಗಮನ ಹರಿಸಿದಾ.

ನೋಡಿ ಅವನ ಎಂಜೊಪ್ಲಾಸ್ಟಿ ಮಾಡಿದ್ದೇನೆ ಅವನು ಗುಣವಾಗುತ್ತಿರುವ ಲಕ್ಷಣ ಹೆಚ್ಚಾಗುತ್ತಿದೆ ಎಂದು ನಾನು ರೋಗಿಯ ತಂದೆಗೆ ಹೇಳಿದೆ.ಥಿಯಾಂಕ್ಯೂ ಸರ ಎಂದು ರೋಗಿಯ ತಂದೆ ಉತ್ತರಿಸಿದಾ.

ಸ್ವಲ್ಪ ಸಮಯ ನಂತರ ನಾನು ನನ್ನ ಕನಸಲಟೇಶನ್ ಚೆಂಬರಿನಿಂದಾ ಇನ್ನೇನು ಮನೆಗೆ ಹೋಗುವಾ ಎಂದು ಹೊರಬರುತ್ತೀರುವಾಗ. ಮುಂಚೆ ಕಂಡ ಸುಂದರ ಯುವತಿ ನನ್ನ ಕನಸಲ್ಟೇಶನ್ ಚೆಂಬರಿನ ಒಳಗೆ ಬಂದಳು. ಅಂಕಲ್! ಅವರು ಹೇಗಿದ್ದಾರೆ ಎಂದು ಕೇಳಿದಳು. ನನ್ನ ಹೆಂಡತಿ ಹೇಳಿದ ಮಾತು ನನಗೆ ನೆನಪಾಯಿತು "ತೆಲೆಗೆ ಬಣ್ಣ ಹಚ್ಚಿಕೊಳ್ಳಿ",

ಎನ್ನಮ್ಮಾ ನಿನ್ನ ಹೆಸರು, ಎಂದು ನಾನು ಕೇಳಿದೆ .

ಅವಳು, ದೀಪಾ , ಅಂದಳು. ಅವಳು, ಮತ್ತೆ ಕೇಳಿದಳು ಅವರು ಗುಣವಾಗುತ್ತಾರಾ.

ಅಯಿತ್ತಮ್ಮಾ ಗುಣವಾಗುತ್ತದೆ ಅಂದೆ.

ಮುಂದಿನ ವಾರ ನಮ್ಮ ಮದುವೆ ಅಂದಳು, ಅಷ್ಟರಲ್ಲಿ ಸರಿಹೋಗುತ್ತಾರಾ ಎಂದು ಕೇಳಿದಳು

ನೋಡೀ! ನಮ್ಮ ಕನ್ನಡ ಭಾಷೆ, ಬೀದರ ಕಡೆ ಸರಿಹೋಗುತ್ತಾರೆ ಅಂದರೆ ಸಾಯುತ್ತಾರಾ ಎಂದು ಅರ್ಥ, ಅದರ ಹುಬ್ಬಳ್ಳಿಯಲ್ಲಿ ಅದರ ಅರ್ಥ ಗುಣವಾಗುತ್ತಾರಾ ಎಂದು.

ಎನು ಉತ್ತರ ತೋಚದ ನಾನು, ಸುಮ್ಮನೆ ತಲೆ ಅಲ್ಲಾಡಿಸಿದೆ. ಸಿಗರೇಟು ಅಥವಾ ಬಿಡಿ ಸೇದುತ್ತಾನಾ ಎಂದು  ದೀಪಾಳನ್ನು ಕೇಳಿದೆ. ನಾನು ಎಷ್ಟು ಹೇಳಿದರು ಕೇಳ್ಳೋಲ್ಲಾ ಅವರು, ಎಂದು ಗೊಣಗಿದಳು.

ನಿನಗೆ ಹುಡುಗಾ ಎಷ್ಟು ವರ್ಷದಿಂದ ಪರಿಚಿಯ? ಎಂದು ನಾನು  ಕೇಳಿದೆ . ಅವಳು, ಸುಮಾರು 5 ವರ್ಷ. ಅಂದಳು .

ಹಾಗಾದರೆ ಲವ್ ಮ್ಯಾರೇಜಾ ಎಂದು ಕೇಳಿದೆ?. ಹೌದು ಎಂದು ತೆಲೆ ಅಲ್ಲಾಡಿಸಿದಳು .

ನಿಮ್ಮ ಮದುವೆಯ ದಿನಾಂಕಧ ಬಗ್ಗೆ ಆಮೇಲೆ ಮಾತನಾಡೋಣ ಎಂದು ನಾನು ಅವಳಿಗೆ ಉತ್ತರಿಸಿದೆ. ಅವಳು ಸಮಾಧಾನವಾದಂತೆ ಕಾಣುತ್ತಿರಲಿಲ್ಲಾ. ಆದರೂ ನಾನು ನನ್ನ ಕನಸಲ್ಟೇಶನ್ ಚೆಂಬರಿನಿಂದಾ ಹೊರನೆಡೆದೆ.

ಮರುದಿನಾ ನಾನು ಆಸ್ಪತ್ರೆಗೆ ಬಂದೊಡನಾಯೆ, ನಿನ್ನೆ ದೀಪಾಳ ಹಿಂದೆ ನಿಂತ್ತಿದ್ದ ಸುಮಾರು 50 ವರ್ಷದ ಮಹಿಳೆ ಮತ್ತು ಅವಳ ಜೊತೆ ಇದ್ದ ಸುಮಾರು 60 ವರ್ಷದ ಮುದುಕಾ ನನ್ನ ಕನಸಲ್ಟೇಶನ್ ಚೆಂಬರಿಗೆ ಬಂದರು. ನಾವು ದೀಪಾಳ ತಂದೆ ತಾಯಿ ಮತ್ತು ಜಿವನನ (ರೋಗಿಯ) ಜೊತೆ ನಮ್ಮ ಮಗಳ ಮದುವೆ ಮುಂದನ ವಾರಾನೆ ಇದೆ, ಎಲ್ಲ ಏರ್ಪಾಡು ಈಗಾಗಲೇ ಆಗಿಬಿಟ್ಟದೆ, ನಮಗೆ ಮುಂದೇನು ಮಾಡಬೇಕೆಂದು ತೋಚುತ್ತಿಲ್ಲಾ ಅಂದರು.

ರಾತ್ರಿ ಜೀವನನಗೆ ಸ್ವಲ್ಪಾ ಉಸಿರಾಟದ ತೊಂದರೆ ಆಗ್ಗಿದ್ದರಿಂದ ನನಗೆ ಅವನು ಅಷ್ಟು ಬೇಗ ಗುಣವಾಗುವುದು ಕಷ್ಟಸಾಧ್ಯವೆನಿಸಿತ್ತು. ನೋಡಿ ನೀವು ಜೀವನನ ತಂದೆ ತಾಯಿ ಜೊತಿ ಬನ್ನಿ ಮಾತನಾಡೋಣ ಅಂದೆ.

ದೀಪಾಳ ತಾಯಿ, ಸರ! ಮುಂದೆ ಜೀವನನ ಸೌಂಸಾರಿಕ ಜೀವನ ಹೇಗಿರುತ್ತೆ ಅಂತ ನನ್ನನ್ನು ಕೇಳಿದಳು.

ನೋಡಿ ನೀವು ಹುಡಗನ ತಂದೆ ಅಥವಾ ತಾಯಿ ಆಗಿದ್ದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲು ನನಗೆ ಅಧಿಕಾರವಿದೆ ಆದುದಕ್ಕಾಗಿ ತಾವು ಹುಡುಗನ ತಂದೆ ತಾಯಿಯ ಜೊತೆ ಬನ್ನಿ ಅಂದೆ.

ಅವತ್ತು ಜೀವನನ ಅರೋಗ್ಯ, ಗುಣಮುಖವಾಗುವ ಸಂಕೇತ ಕೊಡಲು ಪ್ರಾರಂಭಿಸಿತು. ಇವನನ್ನು ಆದಷ್ಟು ಬೇಗ ಡಿಸಚಾರ್ಜ   ಮಾಡಿ ಕಲಿಸೋಣವೆಂದು ನಿರದರ್ಶಿದೆ.

ಮರುದಿನ ನಾಲ್ಕು ಜನ ಹಿರಿಯರು ಬಂದರು, ನಾನು ಅವರಿಗೆ ನಾಳೆ ರೋಗಿಯನ್ನು ಡಿಸಚಾರ್ಜ ಮಾಡುವ ವಿಚಾರವನ್ನು ತಿಳಿಸಿದೆ.

ದೀಪಾ ಸ್ವಲ್ಪ ಸಮಯದ ನಂತರ ಬಂದು ಅಳಲು ಪ್ರಾರಂಭಿಸಿದಳು, ಏಕೆ ಅಂತ ನಾನು ಕೇಳಿದೆ?. ನನ್ನ ತಾಯಿ ಮದುವೆ ಬೇಡಾ ಅಂತಾ ಹಠ ಹಿಡಿದಿದ್ದಾಳೆ, ದಯವಿಟ್ಟು ತಾವು ತಿಳಿಸಿ ಹೇಳಿರಿ ಅಂದಳು. ವೈದ್ಯನಾಗಿ ನನ್ನ ಲಕ್ಷ್ಮಣ ರೇಖೆಯನ್ನು ದಾಟುವ ಹಾಗಿಲ್ಲಾ. ನನಗೆ ಎನು ಉತ್ತರ ನೀಡಬೆಂದು ತೋಚಲಿಲ್ಲಾ.

ಮರುದಿನ ಜೀವನನನ್ನು ಡಿಸಚಾರ್ಜ ಮಾಡಲಾಯಿತು. ಡಿಸಾಚಾರ್ಜ ಮಾಡುವು ಮುನ್ನ ನಾನು ಅವನನ್ನು ನನ್ನ ಕನಸಲ್ಟೇಶನ್ ಚೆಂಬರಿಗೆ ಕರೆದೆ. ನಿನಗೆ ಸಣ್ಣ ವಯಸಿನಲ್ಲಿ ಏಕೆ ಹೃದಯಘಾಥ ಆಯಿತು, ಎಂಬುವದನ್ನು ಅವನಿಗೆ ವಿವರಿಸಿದೆ. ನೀನು ನೋಡಲು ಇಷ್ಟು ಚನ್ನಾಗಿ, ಆರೋಗ್ಯವಾಗಿ ಇದ್ದೀಯಾ, ಆದರೂ ನಿನಗೆ ಹೃದಯಘಾತವಾಗಲು ನೀನು ಸೇದುತ್ತಿರುವ ಸಿಗರೇಟು ಅಥವಾ ಬಿಡಿ ಅಂದೆ. ನೀನು ದಿನನಿತ್ಯ ವ್ಯಾಯಾಮ ಮಾಡುತ್ತೀಯಾ ಆದರೂ ನಿನಿಗೆ ಹೃದಯಾಘಾಥವಾಗಲು ನಿನ್ನ ದುಶಚಟಗಳೆ ಕಾರಣ ಅಂದು ಅವನಿಗೆ ಹೇಳಿದೆ. ಕೊನಯದೊಂದು ಮಾತು, "ನೀನಗೆ ದೀಪಾ ಬೇಕಾಗಿದ್ದಾರೆ ನೀನು ಸಿಗರೇಟಿಗೆ ದೀಪ ಹಚ್ಚಬೇಡಾ, ನಿನ್ನ ಸಿಗರೇಟಿನಲ್ಲಿ ನಿನ್ನ ದೀಪಾ ಉರಿಯುತ್ತಾಳೆ ನೆನಪಿರಲಿ", ಅವಳು ಈಗಾಗಲೇ ಬಹಳ ನೊಂದ್ದಿದ್ದಾಳೆ ಅವಳನ್ನು ಚೆನ್ನಾಗಿ ನೋಡಿಕೋ ಅಂದೆ. ಅವನ ಕಣ್ಣಲ್ಲಿ ನೀರು ಬಂತು, ಅಳುತ್ತಾ ಅವನು ಹೇಳಿದಾ ನಾನು ಇನ್ನು ಮುಂದೆ ಸಿಗರೇಟ್ ಸೇದುವದ್ದಿಲ್ಲಾ ಅಂದಾ.

ಮೂರುನಾಲ್ಕು ದಿನದ ನಂತರ ದೀಪಾ ಮತ್ತು ಜೀವನ ಬಂದು, ನನಗೆ ತಮ್ಮ ಮದುವೆಯ ಕಾರ್ಡ ನೀಡಿದರು. ದೀಪಾಳ ತಾಯಿ ಮದುವೆಗೆ ಓಪ್ಪಿದಕ್ಕೆ ನನಗೆ ಸಂತೋಶವಾಯಿತು. ಆದರೆ! ನಾನು ವೈದ್ಯನಾಗಿ ಮಾಡಿದ್ದೂ ಸರಿಯೋ ತಪ್ಪೋ ನನಗೆ ತಿಳಿಯಲ್ಲಿಲ್ಲಾ


ಜೀವನನ ಹೃದಯ, ತೀರ್ವ ಹೃದಯಾಘಾತದಿಂದ ಕುಂಠತಗೊಂಡ್ಡಿದ್ದು ನನಗೆ ಗೊತ್ತಿತ್ತು. ಆದರೆ ಅವನಿಗೆ ಅತ್ಯುತ್ತಮವಾದ ಆರ್ಯಕೆ ಆಗ್ಗಿದ್ದರಿಂದಾ ಅವನು ಹೃದಯ ಸ್ವಲ್ಪ ದಿನದ ನಂತರ ಮತ್ತೆ ಮರಳಿ ಒಳ್ಳಯ ಕಾರ್ಯ ಪ್ರಾರಂಭಿಸುವ ಸಾಧ್ಯತೆ ಹೆಚ್ಚಾಗಿತ್ತು, ಆದರೆ, ಅದನ್ನು ತಿಳಿಯಲು ಇನ್ನು 5 ರಿಂದ 6 ವಾರ ಕಾಯಬೇಕು.  ವಿಷಯವನ್ನು ನಾನು ಜೀವನನ ತಂದೆಗೆ  ಡಿಸಚಾರ್ಜ  ಆಗುವ ಮುಂಚೆಯೇ ಹೇಳಿದ್ದೆ.

ಕಾಮೆಂಟ್‌ಗಳು

  1. Dr. after reading your post, I was speechless, your articulation so good that odutta hoda haage kanna Munda nadilikattadeno anno thara baradiddiri... and for the first time I felt how difficult job is being Dr. Inspite of knowing facts, and limitations you listened to your heart... that's hats off to you sir,

    And I must mention I literally laughed at that one line " Talige Banna hachkoli"

    Keep sharing sir.

    ಪ್ರತ್ಯುತ್ತರಅಳಿಸಿ
  2. Adbhuta vada Padajodane Sirji. Kanmunde Aa ellaru bandu hodru...Manasinalli ondodu kshanagalu achhotti...Jeevan na Baalu Belagitu Deepa linda..Adakke Munnudi Baredaddu taavu....

    ಪ್ರತ್ಯುತ್ತರಅಳಿಸಿ
  3. Adbhuta vada Padajodane Sirji. Kanmunde Aa ellaru bandu hodru...Manasinalli ondodu kshanagalu achhotti...Jeevan na Baalu Belagitu Deepa linda..Adakke Munnudi Baredaddu taavu....

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು