ತೀರ್ವ ಹೃದಯಘಾಥ ಯುವಕರಲ್ಲಿ

ಮೊನ್ನೆ ಮುಂಜಾನೆ 4.50 ಘಂಟೆಗೆ ಕಿಮ್ಸ ವೈದ್ಯಕಿಯ ಅಧಿಕ್ಷಕರಿಂದ ದೂರವಾಣಿ ಬಂತು 24 ವರ್ಷದ ವಿದ್ಯಾರ್ಥಿ ಎದೆ ನೋವಿನಿಂದ ಎಮರ್ಜೆನ್ಸಿ ವಾರ್ಡಗೆ ಬಂದದ್ದಾನೆ ಕಾಣಲು ತಿಳಿಸಿದರು. ತಕ್ಷಣ ನಾನು ಅಲ್ಲಿಗೆ ಧಾವಿದಸಿದೆ, ಅಲ್ಲಿ ಆ ವಿದ್ಯಾರ್ಥಿಯು ಗಂಭಿರ ಸ್ಥಿತಿಯಲ್ಲಿ ಇದ್ದ. ಆತನ ಹೃದಯ ಕ್ಷಣಮಾತ್ರದಲ್ಲಿ ಸ್ತಬ್ದವಾಯಿತು, ಎಲ್ಲರೀತಿಯ ಪ್ರಯತ್ನಮಾಡಿದರು ಆತನನ್ನು ನಮ್ಮಿಂದ ಉಳಿಸಿಕೊಳ್ಲಲಾಗಲ್ಲಿ.

ಇತ್ತಚಿನ ದಿನಗಳ್ಳಲ್ಲಿ ಯುವಕರಲ್ಲಿ ತೀರ್ವ ಪ್ರಮಾಣದ ಹೃದಯಘಾಥದ ಸಂಭವ ಹೆಚ್ಚಾಗುತ್ತಿದೆ. ಮದ್ಯ ವಯ್ಯಸ್ಸಿನ್ನಲ್ಲಿ ಹೃದಯಘಾಥ ರೋಗಕ್ಕೆ ತ್ತುತ್ತಾದಾಗ..., ವೆಂಟ್ರಿಕುಲರ ಪಿಬ್ರಿಲೆಶನ ಅಂದರೆ ಹೃದಯ ಸ್ತಬ್ದತೆ ಆಗುವ ಸಾದ್ಯತೆ ಹೆಚ್ಚಾಗಿಸುತ್ತದೆ. ಇದರಿಂದ ಕ್ಷಣಾಮಾತ್ರದಲ್ಲಿ ರೋಗಿಯು ಸಾವನ್ನಪ್ಪುವ ಸಾದ್ಯತೆ ಇರುತ್ತದೆ.

ಮದ್ಯ ವಯ್ಯಸ್ಸಿನ್ನಲ್ಲಿ ಹೃದಯರೊಗ ಹೆಚ್ಚಾಗಲ ಕಾರಣಗಳ್ಳನ್ನು, ಬದಲಿಸಬಹುದಾದ ಅಥವಾ ನಿಯಂತ್ರಿಸಬಹುದಾದ ಕಾರಣಗಳು ಮತ್ತು ಬದಿಲಿಸಲಾಗದ ಅಥವಾ ನಿಯಂತ್ರಿಸಲಾಗದ ಕಾರಣಗಳೆಂದು ವಿಂಗಡಿಸಬಹುದು.
ಬದಲಿಸಬಹುದಾದ ಕಾರಣಗಳು: ಹೆಚ್ಚುತ್ತಿರುವ ಭೊಜ್ಜುತನ, ಸಕ್ಕರೆ ಕಾಯೊಲೆ, ಹೆಚ್ಚು ರಕ್ತದೊತ್ತಡ , ಬೀಡಿ ಸೀಗರೆಟು ಹಾಗು ತಂಬಾಕು ಸೆವನೆ. ಈ ಕಾರಣಗಳನ್ನು ಹತೋಟಿಯಲ್ಲಿ ಇಟ್ಟರೆ ಹೃದಯಘಾಥದ ಸಂಭವವನ್ನು ಸಾಕಸ್ಟು ಕಡಿಮೆ ಮಾಡಬಹುದು.

ಬದಿಲಿಸಲಾಗದ ಕಾರಣಗಳು: ವಂಶಪಾರಂಪರೆ (ಅಣುವೌಂಷಕ), ಗಂಡು ಮಕ್ಕಳಿಗೆ ಮದ್ಯ ವಯ್ಯಸ್ಸಿನ್ನಲ್ಲಿ ಹೆಣ್ಣು ಮಕ್ಕಳಿಗಿಂತ ಹೃದಘಾಥದ ಸಂಭವ ಹೆಚ್ಚು. ಬದಿಲಿಸಲಾಗದ ಕಾರಣಗಳಿಗೆ ಹೆಚ್ಚೆನು ಮಾಡಲು ಸಾದ್ಯವಿಲ್ಲ.
ಹೃದಯರೊಗದ ಬಗ್ಗೆ ನಮ್ಮ ಜನರಲ್ಲಿ ತಿಳಿವಳಕೆ ಇನ್ನು ಕಡಿಮೆ ಇದೆ, ಇದನ್ನು ಜನರಿಗೆ ಸರಿಯಾಗಿ ತೀಳಿಸಿದರೆ ಈ ರೋಗಕ್ಕೆ ಸಾಕಸ್ಟು ಕಡಿವಾಣ ಹಾಕಬಹುದು. ಹ್ರದಯಘಾಥದ ಲಕ್ಷಣವನ್ನು ಜನರಗೆ ಸರಿಯಾಗಿ ತಿಳಿಹೇಳಿದರೆ ಯಸ್ಟೊ ಸಾವನ್ನು ತಪ್ಪಿಸಬಹುದು. ಎಕೆಂದರೆ, ಹ್ರದಯಘಾಥವಾಗಿ ಆಸ್ಪತ್ರೆ ತಲುಪುವ ಮುಂಚಯ ಸರಸರಿ ನೊರ ಜನರಲ್ಲಿ ಮುವತ್ತು ಜನರು ಸಾವನ್ನಪ್ಪುತ್ತಾರೆ. ಹೃದಯಘಾಥವಾದಾಗ ಅತಿ ಸಿಗ್ರದಲ್ಲಿ ರೋಗಿಗೆ ಚಿಕಿಸ್ತೆಯನ್ನು ನಿಡಿಸಬೇಕು, ಇಲ್ಲವಾದಲ್ಲಿ ಹೃದಯವು ಕ್ಷಣ ಕ್ಷಣಕ್ಕೆ ಕುಂಟಿತಕೊಳ್ಳುತದೆ ಮತ್ತು ರೋಗಿಯು ಸಾವನ್ನು ಅಪ್ಪಬಹುದು.

ಹೃದಯಘಾಥವಾದ ರೊಗಿಯಲ್ಲಿ ಕೊರೊನರಿ ಎಂಬ ರಕ್ತನಾಳಗಳು ಹುತುಕೊಂಡಿರಿತ್ತವೆ. ಈ ರಕ್ತನಾಳಗಳಗಳನ್ನು ಅಥಿ ಸಿಗ್ರದಲ್ಲಿ ತೆರೆಯಬೆಕು ಇಲ್ಲವಾದಲ್ಲಿ ಹೃದಯವು ಅಶಕ್ತವಾಗಿ ರಕ್ತವನ್ನು ಮುಂದೆಸಾಗಿಸಲು ತೊಂದರೆಯಾಗುತ್ತದೆ. ಹಾಗೆ ತೊಂದರೆಗೊಂಡ ರೊಗಿಯು ಹೆಚ್ಚು ಕೆಲಸ ಮಾಡಲು ಅಶಕ್ತನಾಗಿರುತ್ತಾನೆ, ಈ ತೊಂದರೆ ಮದ್ಯ ವಯ್ಯಸ್ಸಿನ ಯುವಕನಿಗೆ ಆದರೆ, ಅವನಿಗೆ ಆಮೇಲೆ ಹೆಚ್ಚು ದುಡಿಯಲು ಆಗುವದ್ದಿಲ್ಲಾ.

ಹೃದಯಘಾಥದಲ್ಲಿ ಸ್ಟೆಮಿಯಂಬ ಕಾಯಿಲೆ ಅತಿ ತಿರ್ವವಾದ ಕಾಯಿಲೆ. ಈ ಕಾಯಿಲೆ ಆದ ವೆಕ್ತಿಗೆ ಪ್ರೈಮರಿ ಯೆಂಜೊಪ್ಲಾಸ್ಟಿ ಅಥವಾ ಕ್ಲೊಟಲೈಟ್ಟಿಕ ಮಾತ್ರೆಯನ್ನು ಆದಸ್ಟು ಬೆಗನೆ ನಿಡಬೆಕು. ಕ್ಲೊಟಲೈಟ್ಟಿಕ ಮಾತ್ರೆಯು ಹೃದಯಘಾಥ ಸಂಬವಿಸಿದ ಮುರು ಘಂಟೆಯಲ್ಲಿ ಉತ್ತಮ ಕೆಲಸ ಮಾಡುತ್ತದೆ. ಪ್ರೈಮರಿ ಯಂಜಿಯೊಪ್ಲಾಸ್ಟಿ ಮುರು ಘಂಟೆ ಕಾಲವದಿ ಮಿಂಚ್ಚಿದರು ಸಹ ರೋಗಿಗೆ ಗುನಮುಖನಾಗಲು ಸಹಾಯ ಮಾಡುತ್ತದೆ. ಆದುದರಿಂದ ಪ್ರೈಮರಿ ಯೆಂಜೊಪ್ಲಾಸ್ಟಿಯನ್ನು ಇತ್ತಿನ ದಿನಗಳಲ್ಲಿ ವೈದ್ಯರು ಹೆಚ್ಚಾಗಿ ಸಲಹೆ ನೀಡುತ್ತಾರು.

ನಮ್ಮ ಕರ್ಣಾಟಕ ದಲ್ಲಿ ಹೃದಯಘಾಥವಾದ ರೊಗಿಗಳಿಗೆ ಸಹಾಯ ಮಾಡಲು ನಮ್ಮ ಸರಕಾರ ಉಚಿತವಾಗಿ ಯಂಜಿಯೊಪ್ಲಾಸ್ಟಿಯನ್ನು ಬಿಪಿಯಲ್ ಯೆಸಶಶ್ವಿನಿ ಹಾಗು ಜ್ಯೊತಿಸಂಜಿವಿನಿ ಕಾರ್ಡ ಇದ್ದವರಿಗೆ ಕಲ್ಪಿರುಸುತ್ತಾರೆ. ಈ ಸೇವೆಯನ್ನು ಉಚಿತವಾಗಿ ಸರಕಾರಿ ಹಾಗು ಪ್ರೈವೇಟೆ ಆಸ್ಪತ್ರೆಗಳ್ಳಲ್ಲಿ ಪಡೆಯಬಹುದು. ಎಪಿಲ್ ಕಾರ್ಡುದಾರರು ಸರಕಾರದಿಂದ 65-70% ಲಾಭವನ್ನು ಪಡೆಯಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾವು ಮತ್ತು ವೆಂಟಿಲೇಟರ.

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು